- ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹಣದ ಬದಲಿಗೆ ದಿನಸಿ ಕಿಟ್ ನೀಡುವ ತೀರ್ಮಾನದಿಂದ ಹಿಂದೆ ಸರಿದ ಸರಕಾರ
- ಇನ್ನು ಮುಂದೆಯೂ ಹಣವನ್ನು ಸ್ವೀಕರಿಸಲಿದ್ದಾರೆ ಪ್ರತಿ ತಿಂಗಳು ಉಚಿತ ಅಕ್ಕಿ ಹಣ ಪಡೆಯುತ್ತಿದ್ದ ಬಿಪಿಎಲ್ ಕಾರ್ಡುದಾರರು
- ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
ಗೃಹಲಕ್ಷ್ಮೀ 12 ಮತ್ತು 13ನೇ ಕಂತು ಹಣ ಒಟ್ಟಿಗೆ 4000 ಹಣ ಯಾವ ಯಾವ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ ಎಂದು ತಿಳಿಯೋಣ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಟಿವಿ ಮಾದ್ಯಮದವರು ಪ್ರಶ್ನೆ ಮಾಡಿದರು, ಈಗಾಗಲೇ 11ನೇ ಕಂತಿನ ಗೃಹಲಕ್ಷ್ಮೀ ಹಣವನ್ನು ಬಿಡುಗಡೆ ಮಾಡಿದ್ದೀರಾ, ಇನ್ನು ಉಳಿದ 12 ಮತ್ತು 13 ಕಂತು ಗೌರಿ ಗಣೇಶ ಹಬ್ಬದ ದಿನ ಬಾಗಿನ ರೂಪದಲ್ಲಿ ಮಹಿಳೆಯರ ಖಾತೆಗೆ ಹಾಕುತ್ತೇವೆ ಎಂದು ಈ ಹಿಂದೆ ನೀವೇ ಹೇಳಿದ್ದಿರಿ, ಹಾಗಾಗಿ ನಿಮಗೆ ಇವತ್ತು ನಾವು ಕೇಳುತ್ತಿದ್ದಿವಿ ಗೌರಿ ಗಣೇಶ ಹಬ್ಬಕ್ಕೆ 4000 ಹಣ ಒಟ್ಟಿಗೆ ಹಾಕಿದ್ದೀರಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿ ಉತ್ತರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ಹಣ ಕಾಸು ಇಲಾಖೆ 12 ಕಂತು ಮತ್ತು 13 ಕಂತು ಹಣ ಬಿಡುಗಡೆ ಮಾಡಲು ನಾವು ಸಿದ್ದರಿದ್ದೇವೆ ಎಂದು ತಿಳಿಸಿದೆ, ಇನ್ನೇನೂ ಕೆಲವೇ ದಿನಗಳಲ್ಲಿ ಒಟ್ಟಿಗೆ 4000 ಹಣ ಹಾಕುತ್ತೀವಿ, ಗೌರಿ ಗಣೇಶ ಹಬ್ಬದ ದಿನ 4000 ಹಣ ಬಂದಿಲ್ಲ ಎಂದು ಯಾವ ಮಹಿಳೆಯರು ನಿರಾಸೆ ಆಗಬೇಡಿ, ಇನ್ನು ಕೇವಲ 8 ರಿಂದ 10 ದಿನದ ಒಳಗೆ ಎಲ್ಲಾ ಮಹಿಳೆಯರಿಗೆ ನಾವು ಹಣ ಹಾಕುತ್ತೀವಿ ಎಂದು ತಿಳಿಸಿದ್ದಾರೆ.
ನಾವು ನಿಮಗೆ ಹಣ ಕೊಡಬೇಕು ಎಂದರೆ ಹಣಕಾಸು ಇಲಾಖೆ ಹಣ ಬಿಡುಗಡೆ ಮಾಡಬೇಕು, ಈಗಾಗಲೇ ನಾವು ಕೂಡ ಕ್ವೋಟೇಷನ್ ರೆಡಿ ಮಾಡಿದ್ದೇವೆ, ಒಟ್ಟಿಗೆ 4000 ಹಣ ಕೊಡಲು 5 ಸಾವಿರ ಕೋಟಿಯಿಂದ ರಿಂದ 6 ಸಾವಿರ ಕೋಟಿ ಹಣ ಬೇಕಾಗುತ್ತೆ ಎಂದು, ಹಣಕಾಸು ಇಲಾಖೆ ಇಷ್ಟು ಹಣವನ್ನು ಬಿಡುಗಡೆ ಮಾಡಿದ ತಕ್ಷಣ ನಾವು ಕೂಡ ನಿಮ್ಮ ಖಾತೆಗೆ ಡಿ ಬಿ ಟಿ ಮುಕಾಂತರ ಹಣ ವರ್ಗಾವಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಈ ಬಾರಿ ಹನ್ನೆರಡು ಮತ್ತು 13ನೇ ಕಂತಿನ ಹಣ ಪಡೆಯಲು ಒಟ್ಟು 1 ಕೋಟಿ 30 ಲಕ್ಷ ಫಲಾನುಭವಿಗಳು ಇದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
11ನೇ ಕಂತಿನ ಹಣ ಬಂದಿಲ್ಲದವರಿಗೂ ಶೀಘ್ರದಲ್ಲೇ ನಿಮಗು ಸಹ ಹಣ ಬರುತ್ತೆ ಎಂದು ತಿಳಿಸಿದ್ದಾರೆ, ಕೆಲವು ತಾಂತ್ರಿಕ ದೋಷಗಳಿಂದ 80 ಸಾವಿರ ಮಹಿಳೆಯರಿಗೆ 11ನೇ ಕಂತು ಹಣ ಖಾತೆಗೆ ಜಮಾ ಹಾಗಿಲ್ಲ, ಹಾಗಾಗಿ ಬಂದಿಲ್ಲದ ಫಲಾನುಭವಿಗಳಿಗೆ 12ನೇ ಕಂತು ಬಿಡುಗಡೆ ಮಾಡುವ ಸಂದರ್ಭದಲ್ಲಿ ಒಟ್ಟಿಗೆ ಸೇರಿಸಿ 11ನೇ ಕಂತು ಹಣ ಕೂಡ ಬಿಡುಗಡೆ ಮಾಡುತ್ತೀವಿ ಎಂದು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣದ ಬದಲು ದಿನಸಿ ಕಿಟ್ ವಿತರಣೆ ಎಂದು ಈ ಹಿಂದೆ ಸರ್ಕಾರದಿಂದ ಚರ್ಚೆ ಆಗಿತ್ತು, ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ತಿಳಿಯೋಣ.
ಈ ಹಿಂದೆ ಅಕ್ಕಿ ಹಣ ನೀಡುವುದನ್ನು ನಿಲ್ಲಿಸಿ, ದಿನಸಿ ಕಿಟ್ ಕೊಡಲು ಚಿಂತನೆ ನಡೆದಿತ್ತು. ಅಂದರೆ ತೊಗರಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಆದರೆ ಇದೀಗ, ಸುಸೂತ್ರವಾಗಿ ಮುಂದುವರಿದಿರುವ ಅನ್ನ ಭಾಗ್ಯ ಯೋಜನೆಯಲ್ಲಿ ಅನಗತ್ಯ ಗೊಂದಲ ಸೃಷ್ಟಿಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ಅಕ್ಟೋಬರ್ ತಿಂಗಳಿಂದ ಬಿಪಿಎಲ್ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಸ್ತಾವನೆಯನ್ನು ಸಂಪುಟ ಕೈಬಿಟ್ಟಿದೆ.
ಸದ್ಯದ ವ್ಯವಸ್ಥೆಯಂತೆ ಒಬ್ಬರಿಗೆ 5 ಕೆ ಜಿ ಅಕ್ಕಿ ಜತೆಗೆ, ಪ್ರತಿ ವ್ಯಕ್ತಿಗೆ 170 ರೂ. ಹಣದ ನೇರ ವರ್ಗಾವಣೆಯನ್ನು ಮುಂದುವರಿಸಲು ಸಂಪುಟ ಸಭೆಯು ನಿರ್ಧರಿಸಿದೆ. ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಎಚ್‌ಕೆ ಪಾಟೀಲ್ ಮತ್ತು ಆಹಾರ ಇಲಾಖೆ ಸಚಿವ ಕೆ ಹೆಚ್ ಮುನಿಯಪ್ಪ ಅವರು ಈ ವಿಷಯ ತಿಳಿಸಿದ್ದಾರೆ.
ಕೇಂದ್ರ ಸರಕಾರ ಪ್ರತಿ ಕೆ ಜಿ ಗೆ 28 ರೂ. ದರದಲ್ಲಿ ಅಕ್ಕಿ ನೀಡಲು ಒಪ್ಪಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಭರವಸೆಯಂತೆ 10 ಕೆ ಜಿ ಆಹಾರಧಾನ್ಯ ವಿತರಣೆ ಆರಂಭಿಸಬಹುದೇ? ಅಥವಾ 5 ಕೆಜಿ ಅಕ್ಕಿ ಜತೆಗೆ ಅರ್ಧ ಕೆಜಿ ತೊಗರಿ ಬೇಳೆ, ಅರ್ಧ ಲೀಟರ್ ಅಡುಗೆ ಎಣ್ಣೆ ಮತ್ತು ಅರ್ಧ ಕೆಜಿ ಸಕ್ಕರೆ ಒಳಗೊಂಡ ವಿತರಿಸಬಹುದೇ? ಇಲ್ಲ ಈಗಿರುವ ತಲಾ 5 ಕೆ ಜಿ ಅಕ್ಕಿ ಮತ್ತು 170 ರೂ. ಡಿಬಿಟಿಯ ವ್ಯವಸ್ಥೆಯನ್ನೇ ಮುಂದುವರಿಸುವುದೇ ಎಂಬುದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಮೂರು ಆಯ್ಕೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಈಗಿನ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿದ್ದು, ದಿನಸಿ ಕಿಟ್ ಅಥವಾ ಬೇರೆ ಆಯ್ಕೆಯಿಂದ ವ್ಯವಸ್ಥೆಯಲ್ಲಿ ಮತ್ತೊಷ್ಟು ಗೊಂದಲ ಸೃಷ್ಟಿಯಾಗಬಹುದು. ಅದರ ತಂಟೆಯೇ ಈಗ ಬೇಡ ಎಂದು ಬಹುತೇಕ ಸಚಿವರು ವಾದಿಸಿದ ಹಿನ್ನೆಲೆಯಲ್ಲಿ ಈಗಿನ ವ್ಯವಸ್ಥೆ ಮುಂದುವರಿಕೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ಇದರಿಂದ ಬಿಪಿಎಲ್ ಕಾರ್ಡುದಾರರಿಗೆ ಮುಂದೆಯೂ 5 ಕೆಜಿ ಅಕ್ಕಿ ಜತೆಗೆ 5 ಕೆಜಿ ಅಕ್ಕಿಯ ಹಣ ಒಬ್ಬರಿಗೆ 170 ರೂ.ನಂತೆ ಬ್ಯಾಂಕ್ ಖಾತೆಗೆ ಬರಲಿದೆ.
ಇದರ ಬಗ್ಗೆ ನಿಮ್ಮ ಅನಿಸಿಕೆ ಏನು? ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ವನ್ನು ತಿಳಿಸಿ, ಈಗಾಗಲೇ ಶೇಕಡಾ 93% ಜನರು ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆಜಿ ಅಕ್ಕಿ ಜೊತೆ 2 ಕೆಜಿ ತೊಗರಿಬೇಳೆ, 2 ಕೆಜಿ ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ ಕೊಡಿ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು, ಆದರೆ ಈಗ ಜನಗಳು ಕೇಳಿದ ರೀತಿಯಲ್ಲಿ ನೆಡೆಯಲಿಲ್ಲ ಬದಲಾಗಿ ಉಚಿತ ಅಕ್ಕಿ ಹಣ ಪ್ರತಿ ತಿಂಗಳು ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.