ಎಲ್ಲಾ ಮಹಿಳೆಯರಿಗೆ ಸಿಗುತ್ತೆ ಉಚಿತ 30 ಸಾವಿರ 👆ಬೇಗ ಅರ್ಜಿ ಸಲ್ಲಿಸಿ /ಗೃಹಲಕ್ಷ್ಮೀಯರಿಗೆ ಮತ್ತೊಂದು ಸಿಹಿ ಸುದ್ದಿ

ಎಲ್ಲರಿಗೂ ನಮಸ್ಕಾರ

ಈ ಯೋಜನೆ ಅಡಿಯಲ್ಲಿ ಗೃಹಲಕ್ಷ್ಮೀಯರಿಗೆ ಮಾತ್ರ ಅಲ್ಲದೆ ಎಲ್ಲಾ ಮಹಿಳೆಯರಿಗು ಉಚಿತ 30 ಸಾವಿರ ದಿಂದ 1,50,000 ದ ವರೆಗೆ ಸರ್ಕಾರದಿಂದ ಹಣ ಸಿಗುತ್ತೆ.

ಈ ಯೋಜನೆ ಯಾವುದು? ನೀವು ಎಲ್ಲಿ ಹೋಗಿ ಅರ್ಜಿ ಹಾಕಬೇಕು? ಏನೆಲ್ಲಾ ದಾಖಲಾತಿಗಳು ಬೇಕು ಅನ್ನುವದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೆಳಗೆ ತಿಳಿಯಿರಿ .

ಈ ಯೋಜನೆಯ ಹೆಸರು ಉದ್ಯೋಗಿನಿ ಯೋಜನೆ, ಈ ಯೋಜನೆಗೆ ಎಲ್ಲಾ ಜಾತಿಯ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು, ಸರ್ಕಾರ ಈ ಯೋಜನೆಯನ್ನು ಮಾಡಿರುವ ಉದ್ದೇಶ ಏನಂದರೆ ಮಹಿಳೆಯರು ಏನಾದರು ಸ್ವಂತ ಉದ್ಯೋಗ ಮಾಡಿ ತಮ್ಮ ಕಾಲು ಮೇಲೆ ನಿಂತು ತಮ್ಮ ಜೀವನವನ್ನು ನಡೆಸಲಿ ಎಂದು, ಹಾಗಾಗಿ ನೀವು ಯಾವುದಾದರು ಚಿಕ್ಕ ಪುಟ್ಟ ಉದ್ಯೋಗ ಮಾಡಲು ಬಯಸಿದರೆ ಈ ಯೋಜನೆ ಅಡಿಯಲ್ಲಿ ಸಾಲ ಮತ್ತು ಉಚಿತ ಹಣ ಅಂದರೆ ಸಹಾಯ ಧನವನ್ನು ಪಡೆಯಬಹುದು.

ಎಲ್ಲಾ ಮಹಿಳೆಯರಿಗು ಕೂಡ ಆಸೆ ಇರುತ್ತೆ ನಾವು ಕೂಡ ಏನಾದರು ನಮ್ಮ ಸ್ವಂತ ಬ್ಯುಸಿನೆಸ್ ಮಾಡಿ ಸಂಪಾದನೆ ಮಾಡಬೇಕು ಎಂದು, ಆದರೆ ಸ್ವಂತ ಉದ್ಯೋಗ ನೆಡಸಲು ನಿಮ್ಮ ಬಳಿ ಹಣ ಇರುವುದಿಲ್ಲ, ಆ ಕಾರಣಕ್ಕೆ ನಮ್ಮ ಸರ್ಕಾರ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ

ಮಹಿಳೆಯರು ಯಾವ ರೀತಿ ಸ್ವಂತ ಉದ್ಯೋಗ ಮಾಡಬೇಕು?

ತರಕಾರಿ ಮಾರುವುದು, ಹಣ್ಣು, ಹೂವು ಮಾರಾಟ, ಬೀದಿ ಬದಿ ಯಾವುದೇ ರೀತಿಯ ವ್ಯಾಪಾರ, tailor ಅಂಗಡಿ, ಬ್ಯೂಟಿ ಪಾರ್ಲರ್, ಬ್ಯಾಂಗಲ್ ಸ್ಟೋರ್, ಚಿಕನ್ ಸೆಂಟರ್, ಚಿಲ್ಲರೆ ಅಂಗಡಿ, ಬಟ್ಟೆ ಅಂಗಡಿ, ಪಾನಿಪುರಿ, ಗೋಬಿ ಅಂಗಡಿ, ತಳ್ಳುವ ಗಾಡಿಯಲ್ಲಿ ವ್ಯಾಪಾರ ಈ ರೀತಿ ಯಾವುದೇ ಕೆಲಸ ಮಾಡಲು ಬಯಸಿದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ಮಹಿಳೆಯರಿಗೆ 1 ಲಕ್ಷದಿಂದ 3 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.

SC ST ಮಹಿಳೆಯರಿಗೆ 50% ಸಹಾಯ ಧನ ಸಿಗುತ್ತದೆ.

ಇನ್ನು ಉಳಿದ ಎಲ್ಲಾ ಜಾತಿಯ ಮಹಿಳೆಯರಿಗೆ 30% ಸಹಾಯಧನ ಸಿಗುತ್ತದೆ .

ಉದಾಹರಣೆ, ನೀವು SC ST ಮಹಿಳೆಯರಾಗಿದ್ದು ಈ ಯೋಜನೆಯಡಿಯಲ್ಲಿ 1 ಲಕ್ಷ ಸಾಲ ತಗೊಂಡರೆ, ನಿಮಗೆ 50 ಸಾವಿರ ಸಹಾಯ ಧನ ಸಿಗುತ್ತದೆ, ಇನ್ನು ಉಳಿದ 50 ಸಾವಿರ ಸಾಲವನ್ನು ತೀರಿಸಬೇಕಾಗುತ್ತದೆ.

ನೀವೇನಾದರೂ ಬೇರೆ ಜಾತಿಯ ಮಹಿಳೆಯರಾಗಿದ್ದಾರೆ 1 ಲಕ್ಷ ಸಾಲ ತಗೊಂಡರೆ 70 ಸಾವಿರ ಸಾಲ ತೀರಿಸಬೇಕು, ಹಾಗೆ 30 ಸಾವಿರ ನಿಮಗೆ ಸಹಾಯಧನ ಸಿಗುತ್ತದೆ.

ಹಾಗೆ ನೀವೇನಾದರೂ 2 ಲಕ್ಷ ಸಾಲ ತಗೊಂಡರೆ 1 ಲಕ್ಷ ಸಾಲ ತೀರಿಸಬೇಕು, ಇನ್ನು ಉಳಿದ 1 ಲಕ್ಷ ನಿಮಗೆ ಉಚಿತ ಅಂದರೆ ಸಹಾಯಧನ ಅಂತ ಸರ್ಕಾರ ತೀರಿಸುತ್ತೆ (50% ಸಹಾಯಧನ ಕೇವಲ SC ST ಮಹಿಳೆಯರಿಗೆ.

ಬೇರೆ ಜಾತಿಯ ಮಹಿಳೆಯರು 2 ಲಕ್ಷ ಸಾಲ ತಗೊಂಡರೆ 1 ಲಕ್ಷದ 40 ಸಾವಿರ ಸಾಲ ತೀರಿಸಬೇಕು ಹಾಗೆ 60 ಸಾವಿರ ನಿಮಗೆ ಸಹಾಯಧನ ಸಿಗುತ್ತೆ .

ಇದೆ ರೀತಿ ನೀವು 3 ಲಕ್ಷ ಸಾಲವನ್ನು ಈ ಯೋಜನೆ ಅಡಿಯಲ್ಲಿ ಪಡೆಯಲು ಬಯಸಿದರೆ 50,000 ಸಹಾಯ ಧನ ಪಡೆಯಬಹುದು (SC ST ಮಹಿಳೆಯರು )

ಬೇರೆ ಜಾತಿಯ ಮಹಿಳೆಯರು 3 ಲಕ್ಷ ಸಾಲ ತಗೊಂಡರೆ 2 ಲಕ್ಷದ 10 ಸಾವಿರ ಮಾತ್ರ ಸಾಲ ತೀರಿಸಬೇಕು,ಇನ್ನು ಉಳಿದ 90 ಸಾವಿರ ಹಣವನ್ನು ಸರ್ಕಾರ ಸಹಾಯ ಧನ ಎಂದು ಕೊಡುತ್ತದೆ .

ಹಾಗಾದರೆ ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು?

ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರ ಅಥವಾ ಕರ್ನಾಟಕ ಒನ್ ಕೇಂದ್ರ ಕ್ಕೆ ಭೇಟಿ ನೀಡಿ ಉದ್ಯೋಗಿನಿ ಯೋಜನೆ ಗೆ ಅರ್ಜಿ ಹಾಕಬೇಕು ಎಂದು ಕೇಳಿದರೆ ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಿಮಗೆ ತಿಳಿಸಿ ನಿಮ್ಮಿಂದ ಅರ್ಜಿಯನ್ನು ಹಾಕಿಸಿಕೊಳ್ಳುತ್ತಾರೆ.

ಉದ್ಯೋಗಿನಿ ಯೋಜನೆಗೆ ಅರ್ಜಿ ಹಾಕಲು ಏನೆಲ್ಲಾ ದಾಖಲಾತಿಗಳು ಬೇಕು?

ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ವಾಸಸ್ಥಳ ದೃಡೀಕರಣ ಪತ್ರ .

ಅರ್ಜಿ ಹಾಕುವ ಫಲಾನುಭವಿಗಳ ಆದಾಯ ಎಷ್ಟು ಇರಬೇಕು? ನೀವೇನಾದರೂ ಪರಿಶೀಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ (SC, ST) ಗೆ ಸೇರಿದವರಗಿದ್ದಾರೆ, ನಿಮ್ಮ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಮೀರಿರಬಾರದು.

ಬೇರೆ ಜಾತಿಯ ಮಹಿಳೆಯರಿದ್ದರೆ, ನಿಮ್ಮ ವಾರ್ಷಿಕ ಆದಾಯ 1,50,000 ಒಂದು ಲಕ್ಷದ ಐವತ್ತು ಸಾವಿರದ ಒಳಗೆ ಆದಾಯ ಇರಬೇಕು

ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಕೆಳಗೆ ಕೊಟ್ಟಿರುವ ವೀಡಿಯೊ ದಲ್ಲಿ ವೀಕ್ಷಿಸಬಹುದು.

ಇನ್ನೊಂದು ಮುಖ್ಯವಾದ ಮಾಹಿತಿ :

ಒಂದು ಮನೆಯಲ್ಲಿ ಒಬ್ಬ ಮಹಿಳೆ ಮಾತ್ರ ಉದ್ಯೋಗಿನಿ ಯೋಜನೆ ಗೆ ಅರ್ಜಿ ಸಲ್ಲಿಸಬಹುದು, ಮತ್ತು ಈಗಾಗಲೇ ಉದ್ಯೋಗಿನಿ ಯೋಜನೆಗೆ ಅರ್ಜಿಯನ್ನು ಹಾಕಿ ಸಾಲ ಮತ್ತು ಸಹಾಯ ಧನ ಪಡೆದಿದ್ದರೆ ಮತ್ತೆ ಅರ್ಜಿ ಹಾಕುವಂತಿಲ್ಲ, ಒಬ್ಬರು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದು.

ಓದು ವೇಳೆ ಕಳೆದ ವರ್ಷ ನೀವೇನಾದರೂ ಅರ್ಜಿ ಹಾಕಿ ಇಲ್ಲಿವರೆಗೂ ನಿಮಗೆ ಈ ಯೋಜನೆ ಅಡಿಯಲ್ಲಿ ಸಾಲ ಮತ್ತು ಸಹಾಯ ಧನ ಸಿಕ್ಕಿಲ್ಲ ಅಂದರೆ ಈ ಬಾರಿ ಮತ್ತೊಮ್ಮೆ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮೀ ಯೋಜನೆಯಲ್ಲಿ ಗೃಹಲಕ್ಷ್ಮೀ ಹಣ ತಗೊಳುತ್ತಿರುವ ಮಹಿಳೆಯರು ಸಹ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ಸಾಮಾನ್ಯ ಮಹಿಳೆಯರು ಸಹ ಅರ್ಜಿ ಸಲ್ಲಿಸಬಹುದು,.

ಹಾಗೆ ಈ ಉದ್ಯೋಗಿನಿ ಯೋಜನೆಗೆ ಪುರುಷರು ಅಥವಾ ಗಂಡಸರು ಅರ್ಜಿ ಹಾಕುವಂತಿಲ್ಲ, ಕೇವಲ ಮಹಿಳೆಯರಿಗೆ ಮಾತ್ರ

ಗೃಹಲಕ್ಷ್ಮೀ 12ನೇ ಕಂತು ಯಾವಾಗ ಬರುತ್ತೆ?

ಈಗಾಗಲೇ ಗೃಹಲಕ್ಷ್ಮೀ 12ನೇ ಕಂತು ಮತ್ತು 13ನೇ ಕಂತಿನ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಧ್ಯಮ ದಲ್ಲಿ ತಿಳಿಸಿರುವ ಪ್ರಕಾರ ಇನ್ನು 8 ರಿಂದ 10 ದಿನದ ಒಳಗೆ ಗೃಹಲಕ್ಷ್ಮೀ 12, 13 ನೇ ಕಂತು ಒಟ್ಟಿಗೆ ಸೇರಿಸಿ ನಾಲ್ಕು ಸಾವಿರ ಹಣ ಬಿಡುಗಡೆ ಮಾಡ್ತಿವಿ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ 11ನೇ ಕಂತಿನ ಹಣ ಇನ್ನು 80 ಸಾವಿರ ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಅವರ ಖಾತೆಗೆ ತಲುಪಿಲ್ಲ ಆದಕಾರಣ 11ನೇ ಕಂತು ಬಂದಿಲ್ಲದವರಿಗೆ ಮೊದಲು ಹಣ ಹಾಕಿ ನಂತರ 12 ಮತ್ತು 13ನೇ ಕಂತು ಹಣವನ್ನು ಬಿಡುಗಡೆ ಮಾಡುತ್ತೀವಿ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮೀ 10 ನೇ ಕಂತಿನ ಹಣ ಅಥವಾ 11ನೇ ಕಂತಿನ ಹಣ ಬಂದಿಲ್ಲ ಅನ್ನುವವರು ಇದ್ದರೆ, ನೀವು ಕೂಡಲೇ ನಿಮ್ಮ ಗೃಹಲಕ್ಷ್ಮೀ ಸ್ಟೇಟಸ್ ಚೆಕ್ ಮಾಡಿಸಬೇಕು,

ಗೃಹಲಕ್ಷ್ಮೀ ಸ್ಟೇಟಸ್ ಎಲ್ಲಿ ಚೆಕ್ ಮಾಡಿಸುವುದು?

ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ ಅಥವಾ ಬೆಂಗಳೂರು ಒನ್ ಕೇಂದ್ರ ಕ್ಕೆ ಹೋಗಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಯನ್ನು ಹೇಳಿದರೆ ನಿಮ್ಮ ಗೃಹಲಕ್ಷ್ಮೀ ಸ್ಟೇಟಸ್ ಚೆಕ್ ಮಾಡಿ, ನಿಮಗೆ ಯಾಕೆ ಹಣ ಬಂದಿಲ್ಲ, ಹಣ ಬರಬೇಕು ಅಂದರೆ ನೀವು ಏನು ಮಾಡಬೇಕು ಎಂದು ಸಂಪೂರ್ಣ ವಾಗಿ ತಿಳಿಸುತ್ತಾರೆ.

ಧನ್ಯವಾದಗಳು!

Leave a Comment