ಭಾಗ್ಯಲಕ್ಷ್ಮೀ ಬಾಂಡ್ ಪಡೆದಿದ್ದ ಜನಗಳಿಗೆ 1 ಲಕ್ಷ ಹಣ ಹಾಕಲು ಸಿದ್ಧತೆ ಮಾಡಿಕೊಂಡ ಸರ್ಕಾರ
ಬೆಳಗಾವಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್,ಕಳೆದ 2 ದಿನದಿಂದ ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕ ಮಾಡುತ್ತಿದ್ದೇವೆ, ಮೆಚ್ಯುರಿಟಿ ಎಷ್ಟು ಜನರದ್ದು ಆಗಿದೆಯೋ ಅವರಿಗೆ 1 ಲಕ್ಷ ಹಣ ಕೊಡುವ ವ್ಯವಸ್ಥೆ ಮಾಡಲು ನಮ್ಮ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು. ಈಗಾಗಲೇ 2 ಲಕ್ಷ ಫಲಾನುಭವಿಗಳ ಬಾಂಡ್ ಮೆಚ್ಯುರಿಟಿ ಆಗಿದೆ ಎಂದು ತಿಳಿಸಿದ್ದಾರೆ.
ಭಾಗ್ಯಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಒಂದು ಲಕ್ಷ ಹಣ ಯಾವಾಗ ಸಿಗುತ್ತೆ ಎಂಬುವುದರ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಕೆಳಗೆ ಓದಿ.
ಭಾಗ್ಯಲಕ್ಷ್ಮಿ ಯೋಜನೆಗೆ ಯಾರೆಲ್ಲ 2006ನೇ ಇಸವಿಯಲ್ಲಿ ಅರ್ಜಿ ಹಾಕಿದ್ದರೋ ಅಂತಹ ಫಲಾನುಭವಿಗಳಿಗೆ ಇದೆ 2024ನೇ ಇಸವಿಗೆ 18 ವರ್ಷ ತುಂಬುತ್ತದೆ
ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಮುಂಚೆ ಭಾಗ್ಯಲಕ್ಷ್ಮೀ ಅಂತಾ ಅನೌನ್ಸ್ ಮಾಡಿದ್ದರು. ಈಗ ಅದರ ಹೆಸರು ಬದಲಾಗಿ ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ. ಯಾರು ಕೂಡ ಗಾಬರಿ ಆಗಬೇಡಿ ಈ ಹಿಂದೆ ಎಲ್‌ಐಸಿಯವರು ಬಾಂಡ್ ಕೊಡುತ್ತಿದ್ದರು. ಈಗ ಅಂಚೆ ಕಚೇರಿಯಿಂದ ಬಾಂಡ್ ಕೊಡುತ್ತಾರೆ ಎಂದಿದ್ದಾರೆ.